ಚಾರ್ಲಿ 777 ಚಿತ್ರ ನೋಡಿದ ಮಂಗಳೂರು ಪೊಲೀಸರು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಶ್ವಾನದಳಕ್ಕೆ ಬಂದಿರುವ ಹೊಸ ನಾಯಿಮರಿಗೆ ಚಾರ್ಲಿ ಅಂತ ಹೆಸರಿಟ್ಟಿದ್ದಾರೆ. ದಕ್ಷಿಣ ಕನಡ ಜಿಲ್ಲೆ ಬಂಟ್ವಾಳದ ಒಂದು ಹಳ್ಳಿಯಿಂದ ಈ ಶ್ವಾನವನ್ನು ಖರೀದಿಸಲಾಗಿದೆ. ಚಾರ್ಲಿ ಸಿನಿಮಾದ ಪ್ರೀಮಿಯರ್ ಶೋ ನೋಡಿರುವ ಪೋಲಿಸ್ ಸಿಬ್ಬಂದಿಗೆ ಸಿನಿಮಾದಲ್ಲಿನ ಚಾರ್ಲಿ ಶ್ವಾನ ಮನಗೆದ್ದಿತ್ತು. ಎಲ್ಲಾ ಸಿಬ್ಬಂದಿ ತಮ್ಮಲ್ಲಿರುವ ಶ್ವಾನಕ್ಕೆ ಚಾರ್ಲಿ ಹೆಸರಿಡುವಂತೆ ಪೊಲೀಸ್ ಕಮಿಷನರ್ ಬಳಿ ಮನವಿ ಮಾಡ್ಕೊಂಡಿದ್ರು. ಹೀಗಾಗಿ ಈ ನಾಯಿಗೂ ಕೂಡ ಚಾರ್ಲಿ ಅಂತ ಹೆಸರಿಟ್ಟು ಕೇಕ್ ಕತ್ತರಿಸಿ ನಾಮಕರಣ ಮಾಡಿ ಸಂಭ್ರಮಿಸಲಾಯಿತು. ಇನ್ನು ಚಿಕ್ಕಬಳ್ಳಾಪುರದಲ್ಲೂ ಚಾರ್ಲಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ನಗರದ ಬಾಲಾಜಿ ಚಿತ್ರಮಂದಿರದಲ್ಲಿ ಚಾರ್ಲಿ ಅಭಿಮಾನಿಗಳ ಸಂಘ ಅಂತ ಬ್ಯಾನರ್ ಹಾಕಿ ಚಿತ್ರ ಶತದಿನೋತ್ಸವ ಆಚರಿಸಲಿ ಅಂತ ಶುಭ ಹಾರೈಸಿದ್ದಾರೆ. ಇನ್ನೂ ಈ ಬ್ಯಾನರ್‍ನಲ್ಲಿ ಚಾರ್ಲಿಯ ಬೃಹತ್ ಫೋಟೋ ಜೊತೆಗೆ ವಿವಿಧ ಶ್ವಾನಗಳ ಫೋಟೋಗಳನ್ನು ಹಾಕಲಾಗಿದೆ.ಈ ಬ್ಯಾನರ್, ಪೋಟೋ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದು..ಜನ ಚಾರ್ಲಿಯ ಅಭಿಮಾನಿಗಳ ಸಂಘಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
#publictv #newscafe #charlie777 #mangalurucitypolice